Sri.Mohanamurthy
Shakti Electric Press, Jayanagar, Mysore.

ಪ್ರಿಯ ಶ್ರೀ ಪರಶಿವಮೂರ್ತಿ ಅವರೆ,

ನಾನು ನಿಮ್ಮ ಪುಸ್ತಕ ಓದಿದೆ. ನನಗೆ ಬಹಳ ಹಿಡಿಸಿತು. ಅದನ್ನು ನನ್ನ ತಾಯಿಗೆ ಓದಲು ಕೊಟ್ಟಿದ್ದೇನೆ.

ನಾನು ನನ್ನ ಜೀವನದಲ್ಲಿ ನೋಡಲು ಅಥವಾ ಅನುಭವಿಸಲು ಸಾಧ್ಯವೇ ಇಲ್ಲದಂತಹ ನಿಮ್ಮ ಜೀವನದ ಅನೇಕ ಘಟನೆಗಳು ನನ್ನನ್ನು ದಿಗ್ಮೂಢನನ್ನಾಗಿಸಿದುವು. ಹಾಗೆಯೇ ಅದೇ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನಾನೂ ನನ್ನ ಮೊದಲ ಮಗಳನ್ನು ಕಳೆದುಕೊಂಡುದನ್ನು ಮತ್ತೆ ಮತ್ತೆ ನೆನಪಿಸಿದುವು.

ಅಲ್ಲಲ್ಲಿ ನೀವು ಬರೆದಿರುವ ವಾಕ್ಯಗಳು ಮತ್ತೆ ಮತ್ತೆ ಮೆಲಕು ಹಾಕುವಂತಿವೆ. ಕನ್ನಡ ಸಾಹಿತ್ಯಲೋಕಕ್ಕೆ ನಿಮ್ಮ ಪುಸ್ತಕ ಒಂದು ಒಳ್ಳೆಯ ಕಾಣಿಕೆ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ಸಹೃದಯರ ಪರಿಚಯವಾದುದು ನನಗೆ ತುಂಬಾ ಸಂತೋಷವಾಗಿದೆ.

ಧನ್ಯವಾದಗಳು.
-ಮೋಹನಮೂರ್ತಿ.

(30-4-2010)